ಶರಾವತಿ ಕುಂಭ

Event details

  • Monday | March 26, 2018 to Thursday | March 29, 2018
  • 1:30 pm
  • Sri Veeranjaneya Temple, Bangarmakki, Talook Honnavar, Gersoppa, Karnataka 581384
  • 08387268333

2

ಶ್ರೀ ವಿಶ್ವವೀರಾಂಜನೇಯ ಮಹಾಸಂಸ್ಥಾನಮ್, ಹೇಮಪುರ ಮಹಾಪೀಠಮ್, ಶ್ರೀಕ್ಷೇತ್ರ ಬಂಗಾರಮಕ್ಕಿಯ ಶರಾವತಿ ನದಿ ತಟದಲ್ಲಿ ಸ್ಥಾಪನೆಗೊಂಡಿರುವ “ವನವಾಸಿ ಸೀತಾರಾಮ ಲಕ್ಷ್ಮಣ” ದೇವರ ಸನ್ನಿಧಿಯಲ್ಲಿ ವಿಳಂಬಿ ಸಂವತ್ಸರದ ಚೈತ್ರಶುದ್ಧ ದಶಮಿ, ಏಕಾದಶಿ, ದ್ವಾದಶಿ ಈ ಮೂರು ದಿನಗಳ ಕಾಲ ಮೂರನೇಯ ಬಾರಿಗೆ “ಶರಾವತಿ ಕುಂಭ” ಹೆಸರಿನ ಕುಂಭಮೇಳ ಆಯೋಜನೆಗೊಂಡಿದ್ದು ಈ ಶುಭಸಂದರ್ಭದಲ್ಲಿ ಸಾಧು-ಸಂತರು, ಗಣ್ಯರು, ಸಮಸ್ತ ಭಕ್ತರೂ ಶರಾವತಿಯ ಪವಿತ್ರ ಜಲದಲ್ಲಿ ಪುಣ್ಯಸ್ನಾನ ಮಾಡಲಿದ್ದಾರೆ. ಮಾರ್ಚ 26ರ ಮುಂಜಾನೆ 05.45 ಕ್ಕೆ ಆರಂಭಗೊಳ್ಳುವ ಕುಂಭಮೇಳವು ಮಾರ್ಚ 29ರ ಮುಂಜಾನೆ 05.30ಕ್ಕೆ ಮುಕ್ತಾಯಗೊಳ್ಳಲಿದೆ. ಈ ಮೂರು ದಿನಗಳಕಾಲವೂ ಭಜನೆ ನಿರಂತರವಾಗಿರುತ್ತದೆ.